Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.
ಈ ಗ್ಯಾಜೆಟ್‌ನಲ್ಲಿ ದೋಷವಿದೆ
ಈ ಗ್ಯಾಜೆಟ್‌ನಲ್ಲಿ ದೋಷವಿದೆ

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಗ್ಯಾಜೆಟ್‌ನಲ್ಲಿ ದೋಷವಿದೆ

ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಮೇ 7, 2011
ನೀನೆ ಮರೆತರೆ ಹೇಗೆ?
ದೂರ ತೀರದ ಕಡೆಗೆ 
ದಾರಿ ಹುಡುಕುತಲಿರುವೆ|
ಸಾಗಿ ಬಂದ ಕೊನೆಗೆ 
ಅಂತ್ಯ ಎಲ್ಲಿದೆ ತಿಳಿಯೆ||  

ದೇಶ ನಿನ್ನದ ಮರೆತೆ
ದಾಸನಾದೆ ಪರಕೆ|
ನೀನೆ ಮರೆತರೆ ಹೇಗೆ
ನಿನ್ನ ತನವನು  ನೀನೆ?||

ಪ್ರತಿಭೆಗೆ ಮನ್ನಣೆಯಿಲ್ಲ
ಕುರುಡು ಕಾರಣ ಕೊಟ್ಟೆ|
ತಿರುಗಿ ನೋಡದೆ ಹೋದೆ
ಏನು ಸುಖವ ಪಟ್ಟೆ?|| 

ಕರುಳ ಬಳ್ಳಿಯ ಕರೆಯ
ಲೆಕ್ಕಿಸದೆ ಕಡಿದ್ಹೋದೆ|
ನಿನ್ನ ಸ್ವಾರ್ಥದ ಕೊಡಕೆ
ಮಿತಿಯೆಂಬುದೊಂದಿದೆಯೇ?||

ಹೊಸ ಹೊಸ ಮಿತ್ರರು ನಿನಗೆ
ಕಾಂಚಾಣದ ದೊರೆ ನೀನೆ|
ಬೆಳೆದ ದೇಶ ಮಿತ್ರರ 
ನೆನಪೇ ಬಾರದೆ ಹೋಯ್ತೆ?||

ಆಡಿದ ಕಾಡಿದ ಬಾಲ್ಯದ
ದೇಶವಿನ್ನೂ ಬಡವೆ|
ನೀನಾದರೂ ಬರಬಾರದೆ    
 ಚೇತನವಾಗಿ ಕತ್ತಲೆಗೆ||

ಕಾಯುತಿರುವಳು ತಾಯಿ
ಹೆತ್ತು ಮುದ್ದಿಸಿದ ಮಗಗೆ|
ಅಮ್ಮನ ಪ್ರೀತಿಯೇ ಬೇಡ
ಎಂಬ ಕ್ರೂರಿಯು ನೀನೆ?||

ನೆಲ, ಜಲ, ಉಸಿರಿದು ನಿನ್ನದೆ  
 ಜನ,ಧನ,ಗಣವೂ ನಿನ್ನದೆ|
ಬದಲಾವಣೆಯ ಗಾಳಿ
ಬೀಸಬಹುದು ನೀ ಬಂದರೆ||

ನಮ್ಮನು ದಾಸ್ಯದಿ ಇಟ್ಟವರ
ಆಳಾಗಿ ದುಡಿಯುವಿಯೇಕೆ?|
ಮೇಲೆ ಬಾರಲು ಬಿಡದವರ
ಬಾಗಿಲು ತಟ್ಟುವಿಯೇಕೆ?||

ಸ್ವಾಭಿಮಾನದ ಕೂಸೆ
ಪಣಕಿಡುವೆ ಅದನ್ಯಾಕೆ?|
ಸಾಧಿಸಿ ತೋರಿಸು ಇಲ್ಲಿಯೇ
ಜಗವೇ ಬರುವುದು ನಿನ್ನಡಿಗೆ|| 
- ಭಾರತೀಯ
ಪ್ರಸನ್ನ ಆರ್ ಹೆಗಡೆ 
 

0 ಕಾಮೆಂಟ್‌(ಗಳು):