Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಆಗಸ್ಟ್ 9, 2011
ದಿನವಿಡಿ ದುಡಿದು ದಣಿದ
ಬೆಳಕೆಂಬ ಭರವಸೆಯ ಸೃಷ್ಟಿಸಿದ ಸೂರ್ಯ
ಕೆಂಪಾಗಿ ಮುಳುಗಿದಾಗ
 ಕತ್ತಲಾವರಿಸಿತು, ಕನಸು ಕರಗಿತು

ಬೆಳಕಿರುವಾಗ ಯೋಚನೆಯೇ ಬರಲಿಲ್ಲ
ಬರಲಿರುವ ಕತ್ತಲೆಯ ನೀಗಿಸಲು
ಕಣ್ಣ ಬಿಟ್ಟು ನೋಡಿದರೂ ಗೋಚರಿಸದಾದಾಗ 
ದಾಸ್ಯದ ಅರಿವಾಯಿತು..!
ಕತ್ತಲಾವರಿಸಿತು, ಕನಸು ಕರಗಿತು

ಅಲ್ಲೊಂದು ಧ್ರುವತಾರೆ ಮಿನುಗುತಿದೆ
ನಾನಿಲ್ಲೆ ಸ್ಥಿರವೆಂಬಂತೆ
ಮತ್ತೊಬ್ಬ ಚಂದ್ರ ಕಾಣಿಸುತ್ತಿದ್ದಾನೆ
ದಿನಕ್ಕೊಂದು ರೂಪು ಪಡೆದು
ಅನಂತ ಆಕಾಶದ ಮೂಲೆಯಲ್ಲೊಂದು ಮಿಂಚು!
ಕತ್ತಲಾವರಿಸಿತು, ಕನಸು ಕರಗಿತು

ದಿನವಿಡಿ ಗಿಜಗುಡುತ್ತಿದ್ದ ಜಾಗ
ತೆಪ್ಪಗಾದಾಗ ಸ್ಮಶಾನ ಮೌನ
ಹೆಜ್ಜೆ ಕಿತ್ತಿಡಲು ಹೆದರಿಕೆ 
ಕತ್ತಲಾವರಿಸಿತು, ಕನಸು ಕರಗಿತು 

ಬೆಳಕಿನ ತುಂಬು ಪ್ರಕಾಶದಲ್ಲಿ
ಸತ್ಯ ಲಕಲಕನೆ ಹೊಳೆದಾಗ
ಮಿಥ್ಯವ ಖಂಡಿಸಲು ಮನಸ್ಸು ಬೆದರಿ
ಅಸಹಾಯಕತೆಯ ತಿಳಿವಾಯಿತು
ಕತ್ತಲಾವರಿಸಿತು, ಕನಸು ಕರಗಿತು   
   
 ಅಲ್ಲೊಂದು  ಸಮಾಜ ಮರುಗುತಿದೆ
ಅನ್ಯಾಯಗಳನು ಎದುರಿಸಲಾಗದೆ
ಇನ್ನೊಬ್ಬ ನಾಯಕ ಹುಟ್ಟಿಕೊಂಡಿದ್ದಾನೆ
ಬಟ್ಟೆಯಂತೆ ಬಣ್ಣ ಬದಲಾಯಿಸುತ್ತಾ
ಸಾಮಾನ್ಯ ಮನುಜನ ಕಣ್ಣಂಚು ತೇವ
ಕತ್ತಲಾವರಿಸಿತು, ಕನಸು ಕರಗಿತು   

ದಿನವಿಡಿ ನಡೆವ ಬಾಳ ವ್ಯವಹಾರದಲ್ಲಿ
ರಾತ್ರಿ ಕಂಡ ಕನಸುಗಳ ಬಿತ್ತಿ
ನೀರೆರೆವ ಅವಕಾಶ ಕಡಿಮೆಯಾದಾಗ
ಕತ್ತಲಾವರಿಸಿತು, ಕನಸು ಕರಗಿತು
   
ಬೆಳಕೊಂದು ಬಂದೇ ಬರುವುದು
ನೆಮ್ಮದಿಯ ತಂದೇ ತರುವುದು
ಎಂಬ ಧೈರ್ಯವ ತಂದುಕೊಳ್ಳಲು 
ಬುದ್ಧಿ ಸಜ್ಜಾಯಿತು
ಕತ್ತಲೆಯ ಕಳೆಯಲು!

ಅಲ್ಲೊಂದು ಹೊಸಕ್ರಾಂತಿ, ಬೆಳಕಿನೆಡೆಗೆ ಪಯಣ
ಹೊಸ ಆಸೆಗಳು ನೂರಾರು
ಕತ್ತಲೆಗೆ ಅಂಜದೇ ಬದುಕಿರುವಾಗ
ಹೆದರಿಕೆ ಇನ್ನೆಂತು?
ಪರಿಶ್ರಮದಿ ಜಯವೊಲಿದಾಗ
ಕತ್ತಲು ಕಳೆಯಿತು, ಕನಸು  ಬೆಳಗಿತು
                                          - ಭಾರತೀಯ 

0 ಕಾಮೆಂಟ್‌(ಗಳು):