Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಅಕ್ಟೋಬರ್ 21, 2011
ಸ್ಟೀವ್ ಜಾಬ್ಸ್ 
ಅಗಾಧ ಸಂಪತ್ತು ಮನೆಯಲಿ ತುಂಬಿರಲು
ಸುಖವಾಗಿ ಉಂಡಾಡಿ ತಿರುಗಾಡುವುದ ಬಿಟ್ಟು
ಕ್ರೀಯಾಶೀಲತೆಯ ಹಿಂದೆ ಬಿದ್ದವನ 
ಬದುಕಿನತ್ತ ಒಮ್ಮೆ ಕಣ್ಣನರಳಿಸಿದಾಗ 
ಕಣ್ಣಂಚಿನಲಿ ಕಂಬನಿ ಮೂಡಿ 
ಈ ಕವಿತೆ ಹುಟ್ಟಿತು 

ಎಳವೆಯಿಂದಲೇ ಹೊಸತರೆಡೆಗೆ
ನಿರಂತರ ಹುಡುಕಾಟ
ಅದ್ಭುತ ಸಮಯ ಸಂಯೋಜನೆ
ಇದೆಲ್ಲ ಹೇಗೆ ಸಾಧ್ಯವಾಯಿತು ನಿನಗೆ
ಹುಡುಕ ಹೊರಟವರ ಬಾಯಲ್ಲಿ 
ಅಬ್ಬಾ! ಎಂಬ ಉದ್ಘಾರ!

ಕಾಲೇಜು ಕಲಿವಾಗಲೇ ಪತ್ರಿಕೆ ಕಟ್ಟಿದೆ
ಗ್ಯಾರೇಜಿನಲ್ಲಿ ಆಪಲ್ ಬೆಳೆಸಿದೆ
ಆದ ನಷ್ಟಕ್ಕೆ ನೀನೆ ಕಾರಣನೆನ್ದಾಗ
ಹೊರನಡೆದು "ನೆಕ್ಷ್ತ "  ಅಂದೆ!
ನಷ್ಟದ ಬಾಬತ್ತು ಹೆಚ್ಚಾಗಲು
ಇನ್ನೊಮ್ಮೆ ತಿರುಗಿ ಬಂದೆ
ಐಪೋಡ್ ಐಫೋನ್ ಹಿಡಿದು ತಂದೆ!!

ತಾಂತ್ರಿಕ ಜಗತ್ತಿನಲ್ಲಿ ಸಂಚಲನ
ಹುಟ್ಟುಹಾಕಿದ ಮಹಾನ್ ಮಾಂತ್ರಿಕ ನೀನು
ಬಾಸ್ ಎಂದು ಕರೆಯಿಸಿಕೊಳ್ಳಲು 
ಇಷ್ಟಪಡದೆ ನೌಕರರ ಪ್ರೀತಿಯ 
ಮಿಸ್ಟರ್ "yes" ಆದೆ 
ನೋಡುನೋಡುತ್ತಲೇ ಐಪಾಡ್ ಕೊಟ್ಟೆ

ನೆಲಕಚ್ಚಬಹುದಿದ್ದ ಸಂಸ್ಥೆಯ 
ಮತ್ತೆ ಮೇಲಕ್ಕೆತ್ತಿ 
ತಲೆಯೆತ್ತಿ ನಡೆದೆ
ಬದುಕಲ್ಲಿ ಭರವಸೆ ಕಳೆದುಹೋದಾಗ 
ಭಾರತಕ್ಕೆ ಭೇಟಿ ಕೊಟ್ಟೆ
ಬುದ್ಧನ ತತ್ವ ಸರಿಯೆಂದೆ

ಕ್ಯಾನ್ಸರ್ ನಿಂದ  ಬಳಲುವಾಗ
ಇರುವ ದಿನವೆಷ್ಟೆಂದು ಲೆಕ್ಕ ಹಾಕಿದೆ
ಅಂತಿಮ ಗುರಿ ತೀರ್ಮಾನಿಸಿ 
ಕೊನೆಯುಸಿರಿರುವರೆಗೂ ದುಡಿಯಬೇಕೆಂದೆ
ಆಸೆಗಳ ಈಡೇರಿಸಿಕೊಳ್ಳುವುದರ ಜೊತೆಗೆ
ವಿಶ್ವವ ಬದಲಾಯಿಸಬಹುದೆಂದೆ

ಓ ಸ್ಟೀವ್ ಜಾಬ್ಸ್ 
ನೀನೀಗ ಚಿರಶಾಂತಿಯಲ್ಲಿ ಲೀನ
ಆಧ್ಯಾತ್ಮದ ಅನಂತ ಚೆತನದಲ್ಲಿ ವಿಲೀನ 
ಆದರೆ ನಿನ್ನ ಸಾಧನೆಗಳು
ನೀ ಕೊಟ್ಟುಹೋದ ವಸ್ತುಗಳ ರೂಪದಲ್ಲಿ
ಜಗದ ಮನದಲ್ಲಿ ಶಾಶ್ವತ

- ಭಾರತೀಯ 
ಪ್ರಸನ್ನ ಆರ್ ಹೆಗಡೆ
  
   

0 ಕಾಮೆಂಟ್‌(ಗಳು):