Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಅಕ್ಟೋಬರ್ 4, 2012
ಏಕೆ ಹೀಗೆ? ಅರ್ಥವೇ ಆಗುತ್ತಿಲ್ಲ!
ಹೀಗೆಂದ ಕೂಡಲೇ ಬದುಕಿನ ಬಗ್ಗೆ
ಕೊರೆಯುವೆನೆಂದು.. ಕ್ಷಮಿಸಿ ಬರೆಯುವೆನೆಂದು 
ತಪ್ಪು ತಿಳಿದುಕೊಳ್ಳಬೇಡಿ 

ಮೊಟ್ಟೆ ಮೊದಲಾ? ಕೋಳಿ ಮೊದಲಾ?
ಎಂದು ಯಾರಾದರೂ ಕೇಳಿದರೆ 
ಹೊಟ್ಟೆ ಮೊದಲಾ ಊಟ ಮೊದಲಾ 
ಎಂದು ಕೆಳೋಣವೆನ್ನಿಸೋತ್ತೆ 
ಕ್ಷಮಿಸಿ, ನಾನು ಒಳ್ಳೆ ಹುಡುಗ 
ಹಾಗೆ ಕೇಳಲಾರೆ..

ಹೃದಯದ ಮಾತುಗಳ ಹೇಳಿಕೊಳ್ಳಬೇಕೆಂದರೆ 
ಅದೆಲ್ಲಿಯೋ ಅಡಗಿ ಕುಳಿತಿರುವ ಅಹಂಕಾರ 
ಧುತ್ತೆಂದು ಎದುರು ಬಂದು 
ಭಯೋತ್ಪಾದಕನಂತೆ ಬಾಯಿ ಕಟ್ಟಿ 
ಮುಖದ ಮೇಲೆ ನೆರಿಗೆ ತರಿಸಿ 
ಖಳನಾಯಕನನ್ನಾಗಿಸುತ್ತದೆ!!!

ಆದರೂ ಪಾಪ, ಮೂಲೆಯಲ್ಲಿರುವ 
ಆ ಮುರುಕು ಕನ್ನಡಿ 
ನೀನೆ ಇಂದ್ರ, ನೀನೆ ಚಂದ್ರ ಎಂದು 
ಉಬ್ಬಿಸುತ್ತದೆ.. 
ನಂಬಲಾಗುವುದಿಲ್ಲ ಆದರೂ 
ಮರ್ಕಟ ಮನ ಕೇಳುವುದಿಲ್ಲ....

ಹಂಚಿಕೊಂಡರೆ ಕಡಿಮೆಯಾಗುತ್ತವೆ 
ದುಃಖ ದುಡ್ಡು ಎರಡೂ 
ಕೆಲವೊಂದು ಹೆಚ್ಚೂ ಆಗುತ್ತವೆ 
ಜ್ಞಾನ, ಪ್ರೀತಿ, ನಲಿವು 
ನೋಡದೆ ಹಂಚಿದರೆ 
ಇನ್ನೂ ಏನೇನೋ ಆಗುತ್ತವೆ, ಬರುತ್ತವೆ!

ಏಕೆ ಇಂದು ಹೀಗೇಕೆ ಬರೆಯುತ್ತಿದ್ದೇನೆ?
ದೇವರಾಣೆಗೂ ಗೊತ್ತಿಲ್ಲ!
ಯೋಚನೆಗಳು ಹೀಗೇಕೆ ಹರಿದಾಡುತ್ತಿವೆ 
ತಿಳಿದಿಲ್ಲ... ಆದರೂ 
ಏನೋ ಮಾಡುತ್ತಿದ್ದೇನೆ ಅಂದುಕೊಳ್ಳುವೆನಲ್ಲ 
ಅದರಲ್ಲೇ ಸಮಾಧಾನವಿದೆ 

0 ಕಾಮೆಂಟ್‌(ಗಳು):