Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಮೇ 3, 2011
ಓ ಕವಿತೆ ನಿನ್ನ ಮೇಲೊಂದು ಕವಿತೆ

ಬರೆಯಲೆಂದು ಲೇಖನಿ ಹಿಡಿದು ಕುಳಿತಾಗ
ಪದಗಳಿಗೆ ತಡಕಾಡಿ, ಭಾವಗಳಿಗೆ ಹುಡುಕಾಡಿ
ಲಯಬದ್ಧ ಸಾಲುಗಳಿಗೆ ತಿಣುಕಾಡಿ
ಕಟ್ಟ ಕಡೆಯಲ್ಲಿ, ಹಾಳೆಯ ಮೇಲೆ ಮೂಡಿದ
ಅಕ್ಷರಗಳಿಗೆ ಕವಿತೆಯೆನ್ನಲೆ?
ಅಥವಾ ಕವಿತೆ ಅದಕ್ಕೂ ಮಿಗಿಲಾದುದೆನ್ನಲೇ?

ವಿಷಯದ ಆಳ ಹೊಕ್ಕಿ ಯೋಚಿಸುವ
ಪಂಡಿತನಂತೂ ನಾನಲ್ಲ
ಏನೂ ಅರಿಯದ ಮುಗ್ಧನಂತೂ ಮೊದಲೇ ಅಲ್ಲ
ಆದರೂ ಪ್ರತಿಯೊಂದು ಪದವು
ಹೊಸತೆಂದೆನಿಸುವುದು, ಹೊಸ ಕಾರಣ ಹುಡುಕುವುದು
ಕವಿತೆಯೆಂದರೆ ಇದುವೆ?

ಗೊತ್ತಿಲ್ಲಗಳ ಗೋಪುರದ ಅಂತಪುರದಡಿಯಲ್ಲಿ
ನಡೆಯುತಿಹುದು ಮಾನವ ಜೀವನ
ಕನಸೆಂಬ ಕಲ್ಪನೆಯ ಬೆನ್ನುಹತ್ತಿ
ಕಾಣದೂರಿನ ದಾರಿಯ ಹುಡುಕಿ
ಕಳೆಯುತ್ತಾ ಆಯುಷ್ಯವೆಂಬ ಪುಟ್ಟ ಕಾಲವ
ಬೆಳೆಸುತ್ತ ಸಂಬಂಧಗಳೆಂಬ ಬಂಧವ

ಯಾವಾಗ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ
ನೋವಿಗೆ ನಲಿವಿಗೆ ಯೋಚನೆಗೆ
ಸದಾ ಸಾಂತ್ವನವೀಯುತ್ತ, ತನ್ನದೇ ಬಳಗ
ತಾ ಬೆಳೆಸಿಕೊಂಡು ಬರುತ್ತಿದೆ
ಕಾಲವ ಸರಿಸುತ್ತಿದೆ
ಕವಿತೆ ನೀ ಮಾಯೆಯೇ ನಿಜ!!!!
ಭಾರತೀಯ
ಪ್ರಸನ್ನ ಆರ್ ಹೆಗಡೆ




0 ಕಾಮೆಂಟ್‌(ಗಳು):