Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಸೆಪ್ಟೆಂಬರ್ 4, 2011
"ಚೆನ್ನಾಗಿರು"
 
ತಂಗಾಳಿಯಂತೆ ತಿಳಿಯಾಗಿ ಬಂದು 
ಮಿಂಚಂತೆ ಮಾಯವಾದವಳ
ಮನದೊಳಗೆ ಮರು ಮರುಗಿ 
ಮರಳಿ ಹುಡುಕಲೇನು?

ಬಿನ್ನವಿಸಲು ಬಾಯೇ ಬರಲಿಲ್ಲವಲ್ಲ
ಎಂದು ಸುಮ್ಮನೆ ಕುಳಿತು 
ಕೈ ತಪ್ಪಿದ ಅವಕಾಶವ ನೆನೆ ನೆನೆದು
ನನ್ನೊಳಗೆ ಕೊರಗಿದರೇನು?

ಪ್ರೇಮವೆಂದಿಗೂ ಏಕಾಂಗಿಯಲ್ಲ 
ಏಕಾಂಗಿಯಾಗಿ ಭಾವನೆಗಳ ಬಚ್ಚಿಟ್ಟೆನಲ್ಲ 
ಅರಳುವ ಮುನ್ನವೇ ಮುದುಡಿದ 
ಪ್ರೀತಿಗೆ ಪರಿತಪಿಸಿ ಪ್ರಯೋಜನವೇನು?  

ಪ್ರೇಮ.! ಪ್ರೇಮಿಸುವೆನೆಂಬ
ಭಾವಕ್ಕಿಂತ ಬೇರೆಯಾದುದೆಂದು
ಅರಿವಾದರೂ, ಹೇಳದೆ ತಿಳಿಯದೆಂದು 
ಕಟ್ಟ ಕಡೆಗೆ ಅನಿಸಿತಲ್ಲವೇನು?

ಕಣ ಕಣದಿ ಅನುರಣಿಸಿ
ಕಾರಣ ಕೇಳದೆ ಕನಿಕರಿಸಿ 
ಅವಳೇ ಬಂದು ನಿವೇದಿಸಲೆಂದು ಬಯಸಲು 
ಆಕೆಯೂ ಮನುಜ   ಮಾತ್ರಳೆಂಬುದ  ಮರೆತೆಯೇನು?

ಹೋದವಳು ಹೋಗಲಿ ಕಾಣಿಸದಂತೆ 
ಎಂದುಕೊಳ್ಳಲು ಕಷ್ಟವಾದರೂ 
ಹೃದಯದ ಮೂಲೆಯಲ್ಲೊಂದು ಅಲೆಯೆದ್ದು 
ಹರಸುವೆನು ಅವಳು ಚೆನ್ನಾಗಿರಲೆಂದು!
                                          - ಭಾರತೀಯ
                                            ಪ್ರಸನ್ನ. ಆರ್. ಹೆಗಡೆ  

0 ಕಾಮೆಂಟ್‌(ಗಳು):