Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಜುಲೈ 31, 2012
ನಕ್ಕೋತ ಬಂದಳ ಆಕಿ 

ನಕ್ಕೋತ ಬಂದಳ ಆಕಿ
ಮುಂಗುರುಳ ಗಾಳಿಗೆ ತೇಲಿ 
ಆ ಸೊಂಟ ತುಸುವಾಗಿ ಬಳುಕಿ 
ನಕ್ಕೋತ ಬಂದಳ ಆಕಿ 

ರವಿಯೆದ್ದ ಮುಂಜಾನೆಯಾಗ 
ಮಂಜಿನ್ನು ಹಾರದಿರುವಾಗ 
ಆ ಬೆಳಕೆ  ತಾ ನಿಂತು ನೋಡೋಹಾಂಗ 
ನಕ್ಕೋತ ಬಂದಳ ಆಕಿ 

ದಾಳಿಂಬೆಯಂತ ದಂತಪಂಕ್ತಿ  
ಕಣ್ಣಂಚು ಹರಿತವಾದ ಕತ್ತಿ 
ಮೆಲ್ಲ ಮೆಲ್ಲಗೊಂದು ಹೆಜ್ಜೆಹಾಕಿ 
ನಕ್ಕೋತ ಬಂದಳ  ಆಕಿ 

ಎತ್ತೆತ್ತ ನೋಡುವಳೊ ಕಳ್ಳಿ 
ನಕ್ಕಾಗ ಮಿಂಚುಳ್ಳಿ ಬಳ್ಳಿ 
ನಾಜೂಕು ಮೈಯಿಯ  ಸುಂದರ ಬೊಂಬಿ 
ನಕ್ಕೋತ ಬಂದಳ ಆಕಿ 

ಮಂಗನಾದರೆಲ್ಲ ಆಕಿ ನೋಡಿ 
 ಬೆಂಬತ್ತಿದವು ದಂಡುಗೂಡಿ 
ಬೆದರುಗೊಂಬಿ ತಾ ಓಟಕಿತ್ತಳು 
ಚಾಣಾಕ್ಷ ಹುಡುಗಿ  ಹೆದರಿ 

ದೂರಾಗ ಕಂಡ ನನ್ನ ನೋಡಿ 
ರಕ್ಷಣೆಯ ನೆಪವೊಂದ ಹೂಡಿ 
ನೇರ ಬಂದವಳೆ  ನನ್ನ ಕೈಯಿಗೆ 
ಕಟ್ಟಿಬಿಟ್ಟಳೊ ರಾಖಿ

ಪೆಚ್ಚಾದ ಮೊರೆಯನು ನೋಡಿ 
ಅಣ್ಣಾ ಎಂದಳಾ ತಂಗಿ 
ಈ ಹುಚ್ಚು ಮನಸ್ಸಿನ ಪರದೆಯನೆತ್ತಿ 
ನಕ್ಕೋತ ಹೋದಳ ಆಕಿ..

  ಭಾರತೀಯ 
ಪ್ರಸನ್ನ ಆರ್ ಹೆಗಡೆ

0 ಕಾಮೆಂಟ್‌(ಗಳು):