Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 24, 2012
                       ?
ತಂಪು ತಂಗಾಳಿ ತಿಳಿಯಾಗಿ ಬೀಸುವಾಗ
ತುಂಬು ಚಂದಿರನ ನೋಡಿಕೊಂಡು
ಮೆತ್ತನೆಯ ಹುಲ್ಲು ಹಾಸಿನ ಮೇಲೆ
ಬರಿಗಾಲಲ್ಲಿ ನಡೆಯೋಣವೆಂದುಕೊಂಡು
ಭೂಮಾತೆಯ ಮೇಲೆ ಹೆಜ್ಜೆಯೂರಿದಾಗ
ಕಾಲಿಗೆ ತಂಪು ಸೂಸಿ  ಮನಸು ಮಗುವಾಯಿತು

ಇಬ್ಬನಿಯೊಂದು ಮೇಲಿಂದ ಇಳಿದು
ಇನಿಯನಂತೆ ನನ್ನ ತಬ್ಬಿ
ಮಂಜು ಮುಸುಕುವ ಸಮಯದಲ್ಲಿ
ಕಚಗುಳಿಯ ಭಾವ ನೀಡಿ
ಎಲ್ಲೋ ಕರೆದುಕೊಂಡು ಹೋಗುವಾಗ
ಸ್ವರ್ಗವೇ ಬೇಡವೆನಿಸಿತು

ಬಾಗಿ ಬಳುಕುವ ಬಳ್ಳಿಯೊಂದು
ಮೆಲ್ಲ ನನ್ನ ಕಡೆಗೆ ಬಂದು
ಮುತ್ತು ನೀಡುವಂತೆ ತಾಗಿ
ತಿಳಿಯಾದುದೊಂದು ಸ್ಪರ್ಶ ನೀಡಿ
ತಿರುಗಿ ತಾ ಹೊರಟಾಗ
ನಲ್ಲೆಯ ನೆನಪು ಮಾಸಿತು

ಪ್ರಕೃತಿ ತನ್ನ ಸೌಂದರ್ಯವನ್ನೆಲ್ಲ
ನನಗಾಗಿ ಪ್ರದರ್ಶನಕ್ಕಿಟ್ಟಂತೆ  ಮನವು ಬಗೆದು
ತನುವು ಗಾಳಿಯಲ್ಲಿ ತೇಲಾಡಿ
ಉಲ್ಲಾಸ ಎದೆಯ ತುಂಬೆಲ್ಲಾ ತುಳುಕಾಡಿ
ಖುಷಿಯೆಂದರೆನೆಂದು ಅರಿವಾಗಿ
ರಾತ್ರಿ ರೋಮಾಂಚನವಾಯಿತು

ಹೊರಗಣ ತಂಪು
ಒಳಗಿನ ಕಾವ ತಣಿಸುವ ಪರಿನೋಡಿ
ನಿಸರ್ಗದ ಜಾಣ್ಮೆಗೆ ತಲೆದೂಗಬೇಕೆನಿಸಿ
ಮುಂದೆ ಹೆಜ್ಜೆ ಕಿತ್ತಿಡುವ ಮೊದಲು
ಎದುರಿಗೆ ಬಂದ ಮಾನವೇತರ ಜೀವಿಗಳ ಕಂಡು
ಮುಗುಳ್ನಗುವೊಂದು ಮೊಗದಲಿ ಮೂಡಿತು

ಮಾನವನ ಸ್ವಾರ್ಥಕ್ಕೆ ಬಲಿಯಾಗಿ
ಕುಡಿವ ನೀರಿಗೂ, ತುಂಡು ಭೂಮಿಗೂ
ಕನಕದ ಬೆಲೆ ಬಂದಿರುವುದ ನೆನೆದು
ಖೇದಗೊಂಡ ಜೀವವೊಂದು
ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಂಡು
ಮುಂಬರಲಿರುವ ಜೀವಗಳ  ನೆನೆಯಿತು

ಮಣ್ಣಿಗಾಗಿ ಹೊಡೆದಾಟ ಕಂಡ ನಮಗೆ
ನೀರಿಗಾಗಿ ಹೊಡೆದಾಡುವ ಕಾಲವಿನ್ನು
ದೂರವಿಲ್ಲವೆಂಬುದರ ಅರಿವಾಗಿ
ಸಿದ್ದತೆಯ ರೂಪಿಸುವದರಲ್ಲಿ
ಬುದ್ಧಿ ತೊಡಗಬೇಕೆನ್ನುವಾಗ
ಭವಿಷ್ಯದ ಕರಾಳತೆ ಬೆಚ್ಚಿ ಬೀಳಿಸಿತು!!!
                                 -ಭಾರತೀಯ
                                   ಪ್ರಸನ್ನ. ಆರ್. ಹೆಗಡೆ

0 ಕಾಮೆಂಟ್‌(ಗಳು):