Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಜನವರಿ 10, 2012
ದೂರದಿಂದ  ಓಡಿಬಂದಿದ್ದೇನೆ

ಉದ್ಯೋಗವನರಸಿ  ಇಲ್ಲಿ
ಧ್ವನಿಯೊಂದು ಕೇಳಿಬಂದಿತು
ಸಮಾಧಾನ  ಸಾಲಿನಲ್ಲಿ  ನಿಲ್ಲಿ!

ಸುತ್ತಲೂ ಕಂಡೆ  ನೂರಾರು  ಮಂದಿ 
ಎಲ್ಲರೂ ನನ್ನಂತೆ ಪದವೀಧರರು
ಕೆಲಸ ಸಿಗದೇ ಇರುವವರು 
ಕಾದು ಕಾದೂ ಸಾಕಾಗಿರುವವರು 

ಹೆಸರೊಂದು ತೂರಿಬಂತು ಗಾಳಿಯಲ್ಲಿ 
ಅಭಿನಂದನೆ, ಚಪ್ಪಾಳೆ!
ನಂತರ ಮತ್ತೊಂದೆರಡು! ಚಪ್ಪಾಳೆ,
ಪಟ್ಟಿ ಮುಗಿಯಿತು ನನ್ನ ಹೆಸರಿಲ್ಲ ಅಲ್ಲಿ!

ಮನದೊಳಗಿನ ಮೂಕವೇದನೆಗೆ  ಮಾತು ಬಾರದೆ
ಮಂದಹಾಸವೊಂದು ಮೊಗದಲಿ ಮೂಡಿ
ಕಣ್ಣಂಚಲಿ ಮಡುಗಟ್ಟಿದ ಕಣ್ಣೀರು 
ಕೆನ್ನೆ ದಾಟಿ ನೆಲ ಸೇರಿತು 

ಗೆದ್ದವಗೆ ಹೇಳಿ ಶುಭಾಷಯ
ಸೋತವಗೆ ಹೇಳಿ ಸಮಾಧಾನ
ನನ್ನಂತೆ ಬಹಳ ಜನರಿರುವುದ ಕಂಡು
ನಿಟ್ಟುಸಿರೊಂದು  ಹೊರಬಂದಿತು

ಕೆಲಸ ನೀಡದ  ವಿದ್ಯೆ
ಅರೆಬೆಂದ  ಪದವೀಧರರ 
ಹುಟ್ಟುಹಾಕುತ್ತಿರುವ ಸಮಾಜ
ರೋಸಿದ ಮನ ವ್ಯವಸ್ಥೆಯ ದೂಷಿಸಿತು
  
ವಿದ್ಯೆಯಾಯಿತು ಉದ್ಯಮ    
ಸರಸ್ವತಿಯ ಹೆಸರ ಮುಂದಿಟ್ಟುಕೊಂಡು 
ಲಕ್ಷ್ಮಿಯ ಆರಾಧನೆ  ನಿರಂತರ
ಉಳಿದದ್ದೆಲ್ಲ  ಅನಂತರ 

ಜಗತ್ತಿನ  ಜನಸಂಖ್ಯೆ  ದಾಟಿತು  ಏಳು  ಶತಕೋಟಿ   
ಬದುಕಬೇಕು,ಬದುಕಲು  ಕಾಸು  ಬೇಕು !
ಕಾಸು ಗಳಿಸಲು  ಕೆಲಸ ಬೇಕು 
ಅದನ್ನು  ಎಲ್ಲಿ  ಹುಡುಕಬೇಕು?

"ನಾವಿದ್ದೇವೆ  ಬನ್ನಿ, ಕೆಲಸ ಕೊಡಿಸುತ್ತೇವೆ
ಎಂಬ  ಅಸಂಖ್ಯಾತ  ಏಜೆನ್ಸಿಗಳು 
ಮೊದಲು  ದುಡ್ಡು  ಕೊಡಿ  ಎಂದು  ಕೈಚಾಚುವಾಗ
ಹರಿದ  ಜೇಬು  ಕಿಸಕ್ಕನೆ  ನಕ್ಕಿತು!

ಅಯ್ಯೋ  ಇನ್ನೂ  ಕೆಲಸ ಸಿಗಲಿಲ್ಲವೆ?
ಅದವನ  ಹಣೆಯಲ್ಲಿ  ಬರೆದಿಲ್ಲ  ಬಿಡು
ಪಾಪ  ಹೀಗಾಗಬಾರದಿತ್ತು
ಎಂಬೆಲ್ಲ  ಪದಗಳ  ಕೇಳಿ  ಕಿವಿ  ಕಿವುಡಾಗಿದೆ

ಸಮಾಜ, ಹೊಲಸು ರಾಜಕೀಯ
ಸ್ಪರ್ಧಾತ್ಮಕತೆಯ ಸೋಗುಹಾಕಿಕೊಂಡ
ಉದ್ಯಮ ಪ್ರಪಂಚವ ನೋಡುತ್ತಾ
ಅಡ್ಡ ದಾರಿ ಹಿಡಿಯದೆ, ನಾನಿನ್ನೂ ಕಾಯುತ್ತೇನೆ 
ಎಂದೋ  ಸಿಗಲಿರುವ ಒಂದು ಕೆಲಸಕ್ಕೆ!
                   
                     -ಭಾರತೀಯ 
                   ಪ್ರಸನ್ನ ಆರ್ ಹೆಗಡೆ   

2 ಕಾಮೆಂಟ್‌(ಗಳು):

Shreedhar Hegde ಹೇಳಿದರು...

Very good one!!!

ಭಾರತೀಯ ಹೇಳಿದರು...

Thank you !!!!