Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ನವೆಂಬರ್ 19, 2012
ಕಳೆದ 65 ವರ್ಷಗಳಿಂದ ನಮ್ಮನ್ನು ಆಳುತ್ತ, ಅಳಿಸುತ್ತಾ, ಅನುದಿನವೂ ಸುದ್ದಿಮಾಡಿ, ಕೆಲವೊಮ್ಮೆ ತಾವೇ ಸುದ್ದಿಯಾಗಿ "ರಾಜಕಾರಣ " ಎಂಬ ಪವಿತ್ರವಾಗಿದ್ದ ಅಖಾಡವನ್ನ ತಿಪ್ಪೆಗುಂಡಿಯನ್ನಾಗಿಸಿದ, ನಮ್ಮ ನಿಮ್ಮ ನಡುವಿನಿಂದಲೇ ಎದ್ದು ಬಂದು, ನಮ್ಮನ್ನೇ ಮರೆತು ಮೆರೆಯುತ್ತಿರುವ ನಲ್ಮೆಯ "ರಾಜಕಾರಣಿ" ಗಳಿಗೆ ಖೇದದಿಂದ ನುಡಿಯುತ್ತಿರುವ ನಾಲ್ಕು ಮಾತುಗಳು, ಅವರದೇ ಭಾಷೆಯಲ್ಲಿ, ಅವರದೇ ರೀತಿಯಲ್ಲಿ....

ಗೊತ್ತಿದ್ದೂ ತಪ್ಪು ಮಾಡುತ್ತೇವೆ
ಕಾನೂನನ್ನೇ ಕೊಂಡುಕೊಳ್ಳುತ್ತೇವೆ
ನಮ್ಮ ಸ್ವಾರ್ಥಕ್ಕೆ ಯಾರನ್ನೋ  ಕುರಿಗಳನ್ನಾಗಿಸಿ,
ತಪ್ಪನ್ನು ವಿಧಿಯ ಮೇಲೆ ಹೊರಿಸಿ,
ತಮಾಷೆ ನೋಡುತ್ತೇವೆ
ನಾವೇ ಸುಳಿಯಲ್ಲಿ ಸಿಕ್ಕಿ ಬಿದ್ದಾಗ
ಕಣ್ಣೀರಾಗಿ ಕರಗುತ್ತೇವೆ

ದೊಡ್ಡ ದೊಡ್ಡ ನೀತಿಗಳ ಬಾಯಲ್ಲಿ ನುಡಿಯುತ್ತಾ
ತಪ್ಪು ಮಾಡಿ ಜಗದ ಮುಂದೆ ಬೆತ್ತಲಾದಾಗ
ಮಾಧ್ಯಮದ ಮುಂದೆ "ಮುಗ್ಧರಾಗುತ್ತೇವೆ?"
ಕೋತಿ ತಾ ಬೆಣ್ಣೆ ತಿಂದು ಮೇಕೆಯ ಬಾಯಿಗೆ
ತುಸು ಸವರಿದಂತೆ, ನಮ್ಮ ಸಮಾಜಕ್ಕಿಷ್ಟು
ಕಾಣಿಕೆಯ ಕೊಟ್ಟು ನಾಯಕರಾಗುತ್ತೇವೆ
ನಮ್ಮ ನಮ್ಮೊಳಗೆ ಕಚ್ಚಾಡುತ್ತೇವೆ

ಪ್ರಜಾಪ್ರಭುತ್ವದ ಸೋಗಿನಲ್ಲಿ
ಉಳ್ಳವರ-ಇರದವರ ಮದ್ಯೆ
ಅಂತರ ಹೆಚ್ಚಿಸಿ,
ದಿನೇ  ದಿನೇ  ಬೆಲೆಯ ಗಗನಕ್ಕೇರಿಸಿ
ಹವಾನಿಯಂತ್ರಿತ ಕಾರಿನಲ್ಲಿ ತಿರುಗಾಡಿಕೊಂಡಿರುತ್ತೇವೆ
ಪ್ರಕೃತಿ ವಿಕೊಪವಾದಾಗ
ಕರವಸ್ತ್ರದ ಹಿಂದಿನ ಕಂಗಳಲ್ಲಿ
ಕಣ್ಣಿರು ಸುರಿಸಿ ಕೈ ತೊಳೆದುಕೊಳ್ಳುತ್ತೇವೆ

ಚುನಾವಣೆ  ಬಂದಾಗ ಹಣ ಸುರಿಸಿ
ಇತರರ ಮೇಲೆ ಕೆಸರೆರಚಿ
ನಂಗಾ ನಾಚ್ ಮಾಡುತ್ತಾ
ಜಂಗಿ ಕುಸ್ತಿ ಆಡುತ್ತೇವೆ...
ಗೆದ್ದಾಗ ಬಾಚಿಕೊಳ್ಳುತ್ತಾ,
ಸೋತಾಗ ಬಾಯಿ ಬಡಿದುಕೊಳ್ಳುತ್ತ
ಸರ್ಕಾರವಾಗಿ, ಅದರ ಕಾವಲು ನಾಯಿಯಾಗಿ
ಆಳುತ್ತೇವೆ!!!

ತಪ್ಪು ನಮ್ಮದಲ್ಲ ಸ್ವಾಮಿ,
ನೀವೇನು ಪುಕ್ಕಸಟ್ಟೆ "ವೋಟು" ಹಾಕುತ್ತೀರೆ?
ತಲೆಗೆ ಐನೂರು, ಮನೆಗೊಂದು ಸೀರೆ
ಅಮಲಿಗೊಂದು ಬಾಟಲಿ
ನಮ್ಮಪ್ಪನ ಗಂಟೆ?
ಇಷ್ಟೆಲ್ಲಾ ಮಾಡಿಯೂ ಸುಮ್ಮನಿದ್ದರೆ
ರಾಜಕಾರಣಕ್ಕೆ ಮರ್ಯಾದೆ ಉಂಟೆ?

ಯೋಚಿಸುವ ಸಮಯ ಬರುತ್ತಲೇ ಇರುತ್ತದೆ
ಪದೇ  ಪದೇ ಐದು ವರ್ಷಗಳಿಗೊಮ್ಮೆ ..
ಆದರೂ ನೀವು ಬದಲಾಗುವುದಿಲ್ಲ
ಮತ್ತು ನಿಮ್ಮಂತೆ ನಾವೂ...
                          -ಭಾರತೀಯ
                         ಪ್ರಸನ್ನ ಆರ್. ಹೆಗಡೆ

0 ಕಾಮೆಂಟ್‌(ಗಳು):